ಹೈದರಾಬಾದ್ : ಲೈಂಗಿಕ ದೌರ್ಜನ್ಯವನ್ನು ವಿರೋಧಿಸಿದ್ದಕ್ಕಾಗಿ ಉದ್ಯೋಗದಾತ 13 ವರ್ಷದ ಬುಡಕಟ್ಟು ಜನಾಂಗದ ಬಾಲಕಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಂದ ಘಟನೆ ತೆಲಂಗಾಣದಲ್ಲಿ ನಡೆದಿದೆ. ಬಾಲಕಿಯನ್ನು ತೆಲಂಗಾಣದ ಖಮ್ಮಮ್ ಪಟ್ಟಣದ ಆರೋಪಿ ಮನೆ ಕೆಲಸಕ್ಕಾಗಿ ನೇಮಿಸಿಕೊಂಡಿದ್ದನು. ಆದರೆ ಆತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಲು ಶುರುಮಾಡಿದ್ದನು. ಇದನ್ನು ಬಾಲಕಿ ವಿರೋಧಿಸಿದ್ದಕ್ಕೆ ಆಕೆಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಇದರ ಪರಿಣಾಮ ಬಾಲಕಿ ಶೇಕಡಾ 70ರಷ್ಟು ಸುಟ್ಟು ಹೋಗಿದ್ದು