ಪ್ರಧಾನಿ ಮೋದಿ ಹೊಗಳಿದ ಕಾಂಗ್ರೆಸ್ ನಾಯಕ ಪಿ ಚಿದಂಬರಂ!

ನವದೆಹಲಿ| Krishnaveni K| Last Modified ಸೋಮವಾರ, 14 ಜೂನ್ 2021 (09:45 IST)
ನವದೆಹಲಿ: ಪ್ರಧಾನಿ ಮೋದಿ ಜಿ7 ಶೃಂಗದಲ್ಲಿ ಮಾತನಾಡಿರುವ ಬಗ್ಗೆ ಕಾಂಗ್ರೆಸ್ ನಾಯಕ, ಮಾಜಿ ಕೇಂದ್ರ ಸಚಿವ ಪಿ ಚಿದಂಬರಂ ಹೊಗಳಿದ್ದಾರೆ. ಆದರೆ ಇಲ್ಲೊಂದು ಟ್ವಿಸ್ಟ್ ಇದೆ.
 > ಪ್ರಧಾನಿ ಮೋದಿ ಭಾಷಣವನ್ನು ಸ್ಪೂರ್ತಿದಾಯಕ ಎಂದಿರುವ ಚಿದಂಬರಂ ಜೊತೆಗೆ ವ್ಯಂಗ್ಯವನ್ನೂ ಮಾಡಿದ್ದಾರೆ. ವಿಶ್ವದ ಎದುರು ಏನು ಭಾಷಣ ಮಾಡಿದ್ದಾರೋ ಅದನ್ನು ಮೋದಿ ಸರ್ಕಾರ ಭಾರತದಲ್ಲಿ ಮಾಡಲಿ ಎಂದು ಟಾಂಗ್ ಕೊಟ್ಟಿದ್ದಾರೆ.>   ‘ಪ್ರಧಾನಿ ಮೋದಿ ಮಾತುಗಳು ಸ್ಪೂರ್ತಿದಾಯಕವಾಗಿತ್ತು. ಅಲ್ಲಿ ಹೇಳಿದ ಮಾತುಗಳನ್ನು ಅವರು ಮೊದಲು ನಮ್ಮ ದೇಶದಲ್ಲಿ ಮಾಡಿ ತೋರಿಸಲಿ. ಜಿ7 ಶೃಂಗದಲ್ಲಿ ನೇರವಾಗಿ ಭಾಗವಹಿಸದ ಏಕೈಕ ನಾಯಕ ಮೋದಿ ಆಗಿದ್ದರು. ಯಾಕೆಂದರೆ ಭಾರತ ಅತ್ಯಂತ ಹೆಚ್ಚು ಕೊರೋನಾ ಸೋಂಕಿರುವ ರಾಷ್ಟ್ರ. ಈ ಕಾರಣಕ್ಕೇ ಅವರನ್ನು ಇತರ ರಾಷ್ಟ್ರಗಳು ದೂರವಿಟ್ಟಿದೆ’ ಎಂದು ಚಿದಂಬರಂ ವ್ಯಂಗ್ಯ ಮಾಡಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :