ಪಾಕಿಸ್ತಾನದ ಪರ ಗೂಢಚಾರಿಕೆ ನಡೆಸುತ್ತಿದ್ದ ಆರೋಪದ ಮೇಲೆ ಭಾರತೀಯ ಸೇನೆಪಡೆಗಳು ಓರ್ವ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಆರೋಪಿಯಿಂದ ಭಾರತೀಯ ಸೇನಾಪಡೆಯ ನಕ್ಷೆಗಳು ಮತ್ತು ಎರಡು ಪಾಕಿಸ್ತಾನಿ ಸಿಮ್ ಕಾರ್ಡ್ಗಳನ್ನು ವಶಕ್ಕೆ ಪಡೆಯಲಾಗಿದೆ. ಪಾಕಿಸ್ತಾನದ ಗೂಢಚಾರ ಬೋಧರಾಜ್ ಎಂಬಾತನನ್ನು ಸೇನಾಪಡೆಗಳು ವಿಚಾರಣೆ ನಡೆಸುತ್ತಿದ್ದು, ಆರೋಪಿ ಜಮ್ಮು ಜಿಲ್ಲೆಯ ಅಮಿಯಾ ಪಟ್ಟಣದ ನಿವಾಸಿ ಎನ್ನುವುದು ಪತ್ತೆಯಾಗಿದೆ. ಮತ್ತಷ್ಟು ಮಾಹಿತಿಗಳು ಲಭಿಸುವ ಸಾಧ್ಯತೆಗಳಿವೆ ಎಂದು ಸೇನಾ ವಕ್ತಾರರು ತಿಳಿಸಿದ್ದಾರೆ.