ಅಂತಾರಾಷ್ಟ್ರೀಯ ಗಡಿಯ ಬಳಿ ಬಿಎಸ್ಎಫ್ ಯೋಧರ ಎಚ್ಚರಿಕೆಯನ್ನು ನಿರ್ಲಕ್ಷಿಸಿ ಭಾರತದ ಗಡಿಯೊಳಗೆ ನುಗ್ಗುತ್ತಿದ್ದ ಮಹಿಳಾ ಭಯೋತ್ಪಾದಕಿಯನ್ನು ಭದ್ರತಾ ಪಡೆಗಳು ಹೊಡೆದುರುಳಿಸಿವೆ. ಪಾಕಿಸ್ತಾನ ಮೂಲದ ಮಹಿಳೆ, ಅಂತಾರಾಷ್ಟ್ರೀಯ ಗಡಿರೇಖೆಯಾದ ಡೇರಾ ಬಾಬಾ ನಾನಕ್ ಸೆಕ್ಟರ್ನಿಂದ ಭಾರತದೊಳಗೆ ನುಗ್ಗಲು ಪ್ರಯತ್ನಿಸಿದಾಗ, ಭದ್ರತಾ ಪಡೆಗಳು ದೇಶದೊಳಗೆ ನುಸುಳದಂತೆ ಎಚ್ಚರಿಕೆ ನೀಡಿವೆ. ಆದಾಗ್ಯೂ, ಮಹಿಳೆ ದೇಶದ ಗಡಿಯೊಳಗೆ ನುಗ್ಗಲು ಮುಂದುವರಿಸಿದಾಗ ಭದ್ರತಾ ಪಡೆಗಳು ಗುಂಡು ಹಾರಿಸಿ ಹತ್ಯೆಗೈದಿವೆ. ಕಳೆದ ರಾತ್ರಿ ಘಾನಿಯಾ ಕೆ ಗಡಿಯ