ನವದೆಹಲಿ : ಬೇರೆ ರಾಷ್ಟ್ರಗಳ ಜೈಲಿನಲ್ಲಿರುವ ನಮ್ಮ ಕೈದಿಗಳ ಪೈಕಿ ಶೇ 90 ರಷ್ಟು ಮಂದಿ ಭಿಕ್ಷುಕರಾಗಿದ್ದಾರೆ ಇಲ್ಲವೇ ಕಳ್ಳರಾಗಿದ್ದಾರೆ ಎಂದು ಪಾಕಿಸ್ತಾನವೂ ಸಹ ಒಪ್ಪಿಕೊಂಡಿದೆ. ಇರಾಕ್ ಮತ್ತು ಸೌದಿ ಅರೇಬಿಯಾ ದೇಶದ ರಾಯಭಾರಿಗಳು ತಮ್ಮ ಜೈಲುಗಳು ಪಾಕಿಸ್ತಾನ ತಿರುಕರು ಮತ್ತು ಕಳ್ಳರಿಂದ ತುಂಬಿ ತುಳುಕುತ್ತಿದೆ ಎಂದು ಪಾಕಿಸ್ತಾನಕ್ಕೆ ದೂರು ಸಹ ನೀಡಿದ್ದಾರೆ.