ಆಸ್ತಿಗಾಗಿ ಜಗಳ: ಮಗನನ್ನೇ ಕೊಂದ ದಂಪತಿ

ಪುದುಚೇರಿ| Krishnaveni K| Last Modified ಗುರುವಾರ, 13 ಫೆಬ್ರವರಿ 2020 (10:31 IST)
ಪುದುಚೇರಿ: ಆಸ್ತಿ ಹಸ್ತಾಂತರ ಕುರಿತಂತೆ ನಡೆದ ಕಲಹದಲ್ಲಿ ದಂಪತಿ ತಮ್ಮ ಪುತ್ರನನ್ನೇ ಕಬ್ಬಿಣದ ಸಲಾಕೆಯಿಂದ ಹೊಡೆದು ಸಾಯಿಸಿದ ಘಟನೆ ಪುದುಚೇರಿಯಲ್ಲಿ ನಡೆದಿದೆ.

 
40 ವರ್ಷದ ರಂಜಿತ್ ಕುಮಾರ್ ಎಂಬವರು ಮೃತರು. ಕೌಟುಂಬಿಕವಾಗಿ ಬಂದಿದ್ದ ಉದ್ಯಮವನ್ನು ತನಗೆ ಹಸ್ತಾಂತರಿಸುವಂತೆ ತಂದೆ-ತಾಯಿ ಬಳಿಕ ಪುತ್ರ ರಂಜಿತ್ ವಾಗ್ವಾದ ನಡೆಸಿದ್ದ. ಇದು ವಿಪರೀತಕ್ಕೆ ಹೋಗಿದ್ದು ಈ ವೇಳೆ ತಾಯಿ ಮೇಲೆ ಹಲ್ಲೆಗೆ ಮುಂದಾಗಿದ್ದ. ಇದನ್ನು ತಡೆಯಲು ತಂದೆ ಆತನಿಗೆ ಕಬ್ಬಿಣದ ಸಲಾಕೆಯಿಂದ ಹೊಡೆದಿದ್ದರು.
 
ಪರಿಣಾಮ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಕೂಡಲೇ ಆರೋಪಿ ತಂದೆ ಪೊಲೀಸ್ ಠಾಣೆಗೆ ತೆರಳಿ ತಪ್ಪೊಪ್ಪಿಕೊಂಡಿದ್ದು, ಶರಣಾಗಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :