ನವದೆಹಲಿ(ಆ.10): ಕೊನೆಗೂ ಚಿತ್ರರಂಗದ ವಿರೋಧಿಸಿದ್ದ ಸಿನಿಮಾಟೋಗ್ರಫ್ ತಿದ್ದುಪಡಿ ಮಸೂದೆಯನ್ನು ಸಂಸತ್ತು ಅಂಗೀಕರಿಸಿದೆ. ಕೇಂದ್ರೀಯ ಸಿನಿಮಾ ಪ್ರಮಾಣಪತ್ರ ಮಂಡಳಿ (ಸಿಬಿಎಫ್ಸಿ)ಯಿಂದ ಅನುಮೋದನೆ ಪಡೆದ ಚಿತ್ರ ಬಿಡುಗಡೆ ಆದ ನಂತರವೂ ಅದರ ಪ್ರಮಾಣಪತ್ರ ಮರುಪರಿಶೀಲಿಸುವ ಅಧಿಕಾರವನ್ನು ಕೇಂದ್ರ ಸರ್ಕಾರಕ್ಕೆ ನೀಡುವ ಮಸೂದೆ ಇದಾಗಿದೆ. ಸೋಮವಾರದ ರಾಜ್ಯಸಭೆಯಲ್ಲಿ ಸಿನಿಮಾ ಪ್ರಮಾಣಪತ್ರ ಮೇಲ್ಮನವಿ ನ್ಯಾಯಾಧಿಕರಣ (ಎಫ್ಸಿಎಟಿ) ಸೇರಿದಂತೆ ಒಟ್ಟಾರೆ 9 ಮೇಲ್ಮನವಿ ನ್ಯಾಯಾಧಿಕರಣಗಳನ್ನು ರದ್ದುಗೊಳಿಸುವ ಮಸೂದೆಗೆ ಕೇಂದ್ರ ಅನುಮೋದನೆ ಪಡೆದಿದೆ. ಕೇಂದ್ರದ ಈ ಕ್ರಮದಿಂದಾಗಿ 1952ರ