ನವದೆಹಲಿ: ಸಂಸದರಿಗೆ ಮತ್ತು ಶಾಸಕರಿಗೆ ಬೇರೆ ಬೇರೆ ಭಾಷೆ ಕಲಿಸುವ ವಿಚಾರದಲ್ಲಿ ಕನ್ನಡವನ್ನು ಅವಗಣಿಸಿದ್ದ ಲೋಕಸಭೆ ಇದೀಗ ಕನ್ನಡಿಗರ ಹೋರಾಟದ ಬಳಿಕ ತನ್ನ ನಿಲುವು ಬದಲಿಸಿದೆ.ಲೋಕಸಭಾ ಸಚಿವಾಲಯ ಸಚಿವರು, ಸಂಸದರಿಗೆ ಭಾರತದ 6 ಮತ್ತು ವಿದೇಶೀ ಭಾಷೆಗಳನ್ನು ಕಲಿಸಲು ವಿಶೇಷ ತರಗತಿ ನಡೆಸಲು ತೀರ್ಮಾನಿಸಿತ್ತು. ಆದರೆ ಭಾರತದ 6 ಭಾಷೆಗಳ ಪೈಕಿ ಕನ್ನಡವಿರಲಿಲ್ಲ. ಇದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಬಗ್ಗೆ ಕನ್ನಡಿಗರು ಸಾಮಾಜಿಕ ಜಾಲತಾಣಗಳ ಮೂಲಕ ತೀವ್ರ ಆಕ್ಷೇಪ