ಸಂಸತ್ ಅಧಿವೇಶನದಲ್ಲಿ ಕೋಲಾಹಲ ಗದ್ದಲಕ್ಕೆ ಕಾರಣವಾದ ಐವರು ಕಾಂಗ್ರೆಸ್ ಪಕ್ಷದ ಸಂಸದರನ್ನು ಸಭಾಪತಿ ಸುಮಿತ್ರಾ ಮಹಾಜನ್ ಅಮಾನತುಗೊಳಿಸಿದ್ದಾರೆ. ಇಂದು ಸದನ ಆರಂಭವಾಗುತ್ತಿದ್ದಂತೆ ಪ್ರತಿಪಕ್ಷಗಳು ಮತ್ತು ಅಡಳಿತ ಪಕ್ಷಗಳ ನಡುವೆ ಗದ್ದಲ, ಕೋಲಾಹಲ ಉಂಟಾಗಿದೆ. ಪ್ರತಿಪಕ್ಷಗಳು ಗೋರಕ್ಷಕರ ಹಿಂಸಾಚಾರ ಕುರಿತಂತೆ ಚರ್ಚೆ ನಡೆಯಲಿ ಎಂದು ಒತ್ತಾಯಿಸಿದ್ದರೆ, ಅಡಳಿತ ಪಕ್ಷದ ಸದಸ್ಯರು ಭೋಫೋರ್ಸ್ ಹಗರಣ ಬಗ್ಗೆ ಚರ್ಚೆಯಾಗಲಿ ಎಂದು ಪಟ್ಟು ಹಿಡಿದರು. ಅಡಳಿತ ಮತ್ತು ಪ್ರತಿಪಕ್ಷಗಳ ಮಧ್ಯೆ ಗದ್ದಲ ಕೋಲಾಹಲ