ನವದೆಹಲಿ: ಮೊನ್ನೆಯಷ್ಟೇ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್, ಸಂಸದ ಶಶಿ ತರೂರ್ ಖಾತೆಗಳನ್ನು ಕಾಪಿ ರೈಟ್ ನೆಪ ಹೇಳಿ ಲಾಕ್ ಮಾಡಿದ್ದ ಟ್ವಿಟರ್ ವಿರುದ್ಧ ಸಂಸದೀಯ ಸ್ಥಾಯಿ ಸಮಿತಿ ವಿವರಣೆ ಕೋರಿ ನೋಟಿಸ್ ನೀಡಿದೆ.ಒಂದೆಡೆ ಕೇಂದ್ರದ ಹೊಸ ಐಟಿ ನಿಯಮಗಳನ್ನು ಪಾಲಿಸುವ ವಿಚಾರದಲ್ಲಿ ಸಂಘರ್ಷ ನಡೆಸುತ್ತಿರುವ ಟ್ವಿಟರ್ ಇದರ ಬೆನ್ನಲ್ಲೇ ಸಚಿವರು ಮತ್ತು ಸಂಸದರ ಖಾತೆಗಳನ್ನು ಲಾಕ್ ಮಾಡಿದ್ದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಈ ಬಗ್ಗೆ ಟ್ವಿಟರ್