ಕಠ್ಮಂಡು : ನೇಪಾಳದ ಖಾಸಗಿ ವಿಮಾನ ಸಂಸ್ಥೆ ನಿರ್ವಹಿಸುತ್ತಿದ್ದ ಸಣ್ಣ ಪ್ರಯಾಣಿಕ ವಿಮಾನ ಭಾನುವಾರ ನಾಪತ್ತೆಯಾಗಿದೆ.ವಿಮಾನದಲ್ಲಿ ನಾಲ್ವರು ಭಾರತೀಯರು ಸೇರಿದಂತೆ ಒಟ್ಟು 22 ಪ್ರಯಾಣಿಕರಿದ್ದರು ಎಂದು ಏರ್ಲೈನ್ ಅಧಿಕಾರಿಗಳು ತಿಳಿಸಿದ್ದಾರೆ.ಸಂಪರ್ಕ ಕಡಿತಗೊಂಡ ವಿಮಾನ ತಾರಾ ಏರ್ 9 ಎನ್ಎಇಟಿ ಅವಳಿ ಎಂಜಿನ್ ವಿಮಾನವು ಪ್ರವಾಸಿ ನಗರವಾದ ಪೋಖರಾದಿಂದ ಜೋಮ್ಸಮ್ನೆಡೆಗೆ ತೆರಳುತ್ತಿತ್ತು. ಬೆಳಗ್ಗೆ ಸುಮಾರು 9:55ರ ವೇಳೆ ಟೇಕ್ಆಫ್ ಆದ ವಿಮಾನ ಸ್ವಲ್ಪ ಸಮಯದಲ್ಲೇ ಸಂಪರ್ಕ ಕಡಿತಗೊಂಡಿತು ಎಂದು ವರದಿಯಾಗಿದೆ. ವಿಮಾನ ಮುಸ್ತಾಂಗ್