ಮುಂಬೈ : ವ್ಯಕ್ತಿಯೋರ್ವ ತನ್ನ ಗರ್ಲ್ಫ್ರೆಂಡ್ ಜೊತೆಗೆ ಪ್ರವಾಸಕ್ಕೆ ಹೋಗಿದ್ದನ್ನು ಪತ್ನಿಯಿಂದ ಮುಚ್ಚಿಡಲು ಹೋಗಿ ಜೈಲು ಕಂಬಿ ಎಣಿಸುವಂತಾಗಿದೆ.ಹೌದು, 32 ವರ್ಷದ ವ್ಯಕ್ತಿಯೋರ್ವ ತನ್ನ ಗರ್ಲ್ಫ್ರೆಂಡ್ ಜೊತೆಗೆ ಮಾಲ್ಡೀವ್ಸ್ ಪ್ರವಾಸ ಹೋಗಿದ್ದನು. ಈ ವಿಚಾರವನ್ನು ಪತ್ನಿಯಿಂದ ಮರೆಮಾಚಲು ಪಾಸ್ಪೋರ್ಟ್ನಲ್ಲಿದ್ದ ವೀಸಾ ಸ್ಟಾಂಪ್ನ ಪುಟಗಳನ್ನು ಹರಿದು ಹಾಕಿದ್ದಾನೆ.ಮಾಲ್ಡೀವ್ಸ್ನಿಂದ ಹಿಂದಿರುಗಿದ ನಂತರ ಪಾಸ್ಪೋರ್ಟ್ ತಪಾಸಣೆ ವೇಳೆ ಆತನ ಪಾಸ್ಪೋರ್ಟ್ನ ಕೆಲವು ಪುಟಗಳು ಕಾಣೆಯಾಗಿರುವುದನ್ನು ವಲಸೆ ಅಧಿಕಾರಿಗಳಿಗೆ ತಿಳಿದುಬಂದಿದ್ದು, ಆತನ ವಿರುದ್ಧ ಮುಂಬೈ ಪೊಲೀಸರು