Widgets Magazine

ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ವಿರುದ್ಧ ಜನರ ಆಕ್ರೋಶ

ರಾಯಚೂರು| pavithra| Last Modified ಶನಿವಾರ, 26 ಅಕ್ಟೋಬರ್ 2019 (11:03 IST)
ರಾಯಚೂರು : ರಾಯಚೂರು ಜಿಲ್ಲೆಯಲ್ಲಿ ನೆರೆಯಿಂದ  ಅಪಾರ ಪ್ರಮಾಣದ ಹಾನಿಯಾದ ಹಿನ್ನಲೆಯಲ್ಲಿ ಜಿಲ್ಲೆಯ ಬಗ್ಗೆ ನಿರ್ಲಕ್ಷ್ಯ ತೋರಿದ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಸವ ಸಾಗರ ಡ್ಯಾಂನಿಂದ ಕೃಷ್ಣಾನದಿಗೆ ಅಪಾರ ನೀರು ಬಿಟ್ಟ ಹಿನ್ನಲೆ ನದಿಪಾತ್ರದ ಗ್ರಾಮಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ. ಅಲ್ಲದೇ ಸಾವಿರಾರು ಪಂಪ್ ಸೆಟ್ ನೀರಲ್ಲಿ ಕೊಚ್ಚಿಹೋಗಿ ಅಪಾರ ನಷ್ಟವಾಗಿದೆ, ನಿರ್ಮಾಣ ಹಂತದ ಬ್ರಿಡ್ಜ್ ಕಂ ಬ್ಯಾರೇಜ್ ಸಹ ಮುಳುಗಡೆಯಾಗಿದೆ. 2ನೇ ಬಾರಿ ಪ್ರವಾಹದಿಂದ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ.


ಇಷ್ಟೆಲ್ಲಾ ಆದ್ರೂ ಜಿಲ್ಲೆಗೆ ಭೇಟಿ ನೀಡದ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ರಾಯಚೂರು ಜಿಲ್ಲೆಯ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದರಲ್ಲಿ ಇನ್ನಷ್ಟು ಓದಿ :