ಸಾಮೂಹಿಕ ಮಾನಭಂಗಕ್ಕೊಳಗಾದ ಮಹಿಳೆಗೆ ಊರಿನಿಂದ ಬಹಿಷ್ಕಾರ

ಮಹಾರಾಷ್ಟ್ರ| pavithra| Last Modified ಗುರುವಾರ, 31 ಡಿಸೆಂಬರ್ 2020 (07:40 IST)
: ಸಾಮೂಹಿಕ ಮಾನಭಂಗಕ್ಕೊಳಗಾದ 30 ವರ್ಷದ ಮಹಿಳೆಯನ್ನು ಗ್ರಾಮಪಂಚಾಯಿತಿ ಊರಿನಿಂದ ಬಹಿಷ್ಕಾರ ಮಾಡಿದ ಘಟನೆ ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಹಳ್ಳಿಯಲ್ಲಿ ನಡೆದಿದೆ.

5 ವರ್ಷಗಳ ಹಿಂದೆ ಆಕೆಯ ಮೇಲೆ ಮಾನಭಂಗ ಎಸಗಲಾಗಿತ್ತು. ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಆಗಿತ್ತು. ಈ ಹಿನ್ನಲೆಯಲ್ಲಿ ಮಹಿಳೆಯನ್ನು ತನ್ನ ಗ್ರಾಮದಿಂದ ಹೊರಹೋಗುವಂತೆ ಗ್ರಾಮಪಂಚಾಯಿತಿ, ಗ್ರಾಮಸ್ಥರು ಬಹಿಷ್ಕಾರ ಹಾಕಿದ್ದಾರೆ. ಅದರ ಜೊತೆಗೆ ಪಕ್ಕದ ಹಳ್ಳಿಯಿಂದಲೂ ಬಹಿಷ್ಕಾರ ಹಾಕಲಾಗಿದೆ. ಈ ಬಗ್ಗೆ ಮಹಿಳೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.ಇದರಲ್ಲಿ ಇನ್ನಷ್ಟು ಓದಿ :