ರಾಜ್ ಕೋಟ್ : ಸಮಯಕ್ಕೆ ಸರಿಯಾಗಿ ಊಟ ಬಡಿಸಿಲ್ಲ ಎಂದು 40 ವರ್ಷದ ರೈತನೊಬ್ಬ ತಾಯಿ ಮತ್ತು ಸಹೋದರಿಯನ್ನು ಹತ್ಯೆ ಮಾಡಿದ ಘಟನೆ ಗುಜರಾತ್ ನ ರಾಜ್ ಕೋಟ್ ನಲ್ಲಿ ನಡೆದಿದೆ. ಮಧ್ಯಾಹ್ನದಂದು ಅಡುಗೆ ಮಾಡುವ ವಿಚಾರಕ್ಕೆ ತಾಯಿ ಮತ್ತು ಸಹೋದರಿಯ ನಡುವೆ ಜಗಳ ನಡೆದಿದೆ. ಆದಕಾರಣ ಇಬ್ಬರು ಅಡುಗೆ ಮಾಡಲಿಲ್ಲ. ಆಗ ಮನೆಗೆ ಬಂದ ರೈತ ಹಸಿವಿನಿಂದ ಊಟ ಬಡಿಸಲು ಹೇಳಿದಾಗ ಇಬ್ಬರು ಅಡುಗೆ ಮಾಡಲಿಲ್ಲ ಎಂಬುದಾಗಿ ತಿಳಿದುಬಂದಿದೆ.