ಲಕ್ನೋ: ಉತ್ತರ ಪ್ರದೇಶದಲ್ಲಿ ಜನರಿಗೆ ಮೋಸ ಮಾಡುತ್ತಿದ್ದ ಪೆಟ್ರೋಲ್ ಬಂಕ್ ಒಂದರ ಮೇಲೆ ಅಧಿಕಾರಿಗಳು ದಾಳಿ ನಡೆಸಲೆಂದು ಬರುವಾಗ ಪೆಟ್ರೋಲ್ ಬಂಕ್ ಇದ್ದಕ್ಕಿದ್ದಂತೆ ನಾಪತ್ತೆಯಾಗಿತ್ತು! ಪೆಟ್ರೋಲ್ ಬಂಕ್ ಮೆಷಿನ್ ಗಳನ್ನು ಸ್ಥಳದಿಂದ ಸಾಗಿಸಿ ಅಡಗಿಸಿಟ್ಟ ಆರೋಪಿಗಳು ಅಧಿಕಾರಿಗಳಿಗೇ ಚಳ್ಳೆ ಹಣ್ಣು ತಿನ್ನಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ಅಕ್ರಮ ಪೆಟ್ರೋಲ್ ಬಂಕ್ ಗಳ ಮೇಲೆ ಅಧಿಕಾರಿಗಳು ರೇಡ್ ನಡೆಸುತ್ತಿದ್ದಾರೆ.ಅಧಿಕಾರಿಗಳು ಸ್ಥಳಕ್ಕೆ ಬರುವಾಗ ಮೆಷಿನ್ ಗಳನ್ನು ಸ್ಥಳಾಂತರಿಸಿದ್ದಲ್ಲದೆ, ಹೆಚ್ಚು ಬೆಲೆ ತೋರಿಸಿ