40 ವರ್ಷಗಳ ದಾಖಲೆ ಬ್ರೇಕ್ ಮಾಡಿದ ಪಿಣರಾಯಿ ವಿಜಯನ್

ತಿರುವನಂತಪುರಂ| Krishnaveni K| Last Modified ಸೋಮವಾರ, 3 ಮೇ 2021 (10:34 IST)
ತಿರುವನಂತಪುರಂ: ಕೇರಳದಲ್ಲಿ ಒಂದು ಬಾರಿ ಯುಡಿಎಫ್, ಇನ್ನೊಂದು ಬಾರಿಗೆ ಎಲ್ ಡಿಎಫ್.. ಈ ರೀತಿ ಕಳೆದ 40 ವರ್ಷಗಳಿಂದ ಒಂದಾದ ಮೇಲೊಂದರಂತೆ ಸರ್ಕಾರ ರಚಿಸುತ್ತಲೇ ಇವೆ.

 
ಆದರೆ ಈ ಬಾರಿ ಪಿಣರಾಯಿ ವಿಜಯನ್ 40 ವರ್ಷಗಳ ದಾಖಲೆ ಬ್ರೇಕ್ ಮಾಡಿದ್ದಾರೆ. ಸಿಎಂ ಪಿಣರಾಯಿ ವಿಜಯನ್ ನೇತೃತ್ವದ ಸರ್ಕಾರವನ್ನು ಒಪ್ಪಿಕೊಂಡ ಕೇರಳ ಜನತೆ ಎಲ್ ಡಿಎಫ್ ಸತತ ಎರಡನೇ ಬಾರಿಗೆ ಅವಕಾಶ ಕೊಟ್ಟಿದ್ದಾರೆ.
 
40 ವರ್ಷಗಳ ಹಿಂದಷ್ಟೇ ಈ ರೀತಿ ಆಗಿತ್ತು. ರಾಹುಲ್ ಗಾಂಧಿ ಕೇರಳದಲ್ಲೇ ಬೀಡುಬಿಟ್ಟು ಪ್ರಚಾರ ನಡೆಸಿದರೂ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಗೆ ಬಹುಮತ ಸಿಕ್ಕಿಲ್ಲ. ಅತ್ತ ಕಿಂಗ್ ಮೇಕರ್ ಆಗುವ ಕನಸು ಕಾಣುತ್ತಿದ್ದ ಬಿಜೆಪಿಯದ್ದು ಶೂನ್ಯ ಸಾಧನೆ.
ಇದರಲ್ಲಿ ಇನ್ನಷ್ಟು ಓದಿ :