ನವದೆಹಲಿ: ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಪ್ರಯಾಣಿಸುತ್ತಿದ್ದ ವಿಮಾನ ಕೆಲ ಕಾಲ ರಾಡರ್ ಸಂಪರ್ಕಕ್ಕೆ ಸಿಗದೇ ಆತಂಕ ಸೃಷ್ಟಿಸಿದ ಘಟನೆ ನಡೆದಿದೆ.ಬ್ರಿಕ್ಸ್ ಶೃಂಗ ಮತ್ತು ಐಬಿಎಸ್ ಎ ಸಭೆಯಲ್ಲಿ ಪಾಲ್ಗೊಳ್ಳಲು ಜೊಹಾನ್ಸ್ ಬರ್ಗ್ ಗೆ ತೆರಳಲು ವಿಶೇಷ ವಿಮಾನದಲ್ಲಿ ಪ್ರಯಾಣಿಸುತ್ತಿದ್ದಾಗ ಸುಮಾರು 14 ನಿಮಿಷಗಳ ಕಾಲ ವಿಮಾನ ರಾಡರ್ ಸಂಪರ್ಕಕ್ಕೆ ಸಿಗದೇ ಆತಂಕ ಸೃಷ್ಟಿಸಿತು.ಅವರು ಪ್ರಯಾಣಿಸುತ್ತಿದ್ದ ವಿಮಾನ ಕಡಿಮೆ ಇಂಧನ ಸಾಮರ್ಥ್ಯವಿರುವುದಾಗಿದ್ದು, ಇದು ಮಾರ್ಗ ಮಧ್ಯೆ ಇಳಿದು ಇಂಧನ ತುಂಬಿಸಿಕೊಳ್ಳಬೇಕಿತ್ತು.