ಜೈಪುರ: ನಾನು ಯಾವತ್ತೂ ರಾಮ ಮಂದಿರ ನಿರ್ಮಾಣ, ಗೋ ಹತ್ಯಾ ನಿಷೇಧ, ರೈತ ಕಲ್ಯಾಣ ಯೋಜನೆಗಳು ಮುಂತಾದವುಗಳ ಬಗ್ಗೆ ಮಾತನಾಡುತ್ತಿದ್ದೆ. ಹೀಗಾಗಿ ಇದನ್ನು ಸಹಿಸದವರು ಸುಳ್ಳು ಪ್ರಕರಣಗಳಲ್ಲಿ ನನ್ನನ್ನು ಸಿಲುಕಿಸಿ ನಕಲಿ ಎನ್ಕೌಂಟರ್ ಮೂಲಕ ನನ್ನನ್ನು ಕೊಲ್ಲಲು ಯತ್ನಿಸಲಾಗುತ್ತಿದೆ ಎಂದು ವಿಶ್ವ ಹಿಂದೂ ಪರಿಷತ್ ಮುಖಂಡ ಪ್ರವೀಣ್ ತೊಗಾಡಿಯಾ ಹೇಳಿದ್ದಾರೆ. ಹತ್ತು ವರ್ಷಗಳಷ್ಟು ಹಿಂದಿನ ಕೇಸೊಂದಕ್ಕೆ ಸಂಬಂಧಿಸಿದಂತೆ ರಾಜಸ್ಥಾನ ಪೊಲೀಸರು ನನ್ನನ್ನು ಎನ್ಕೌಂಟರ್ನಲ್ಲಿ ಮುಗಿಸುವ ಯೋಜನೆ ಹೊಂದಿದ್ದಾರೆ ಎಂಬ ಬಗ್ಗೆ