ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಕೊರೊನಾ ಸೋಂಕಿತನಿಗೆ ನೀಡಿದ ಪ್ಲಾಸ್ಮಾ ಥೆರಪಿ ಸಕ್ಸಸ್

ನವದೆಹಲಿ| pavithra| Last Modified ಸೋಮವಾರ, 27 ಏಪ್ರಿಲ್ 2020 (08:40 IST)

ನವದೆಹಲಿ : ಭಾರತದಲ್ಲಿ ಮೊಟ್ಟ ಮೊದಲಬಾರಿಗೆ ಕೊರೊನಾ ಸೋಂಕಿತ ರೋಗಿಗೆ ಪ್ಲಾಸ್ಮಾ ಥೆರಪಿ ಮಾಡಿದ್ದು, ಇದೀಗ ರೋಗಿ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ ಎಂಬುದಾಗಿ ತಿಳಿದುಬಂದಿದೆ.


 

ದೆಹಲಿಯ 49 ವರ್ಷದ ವ್ಯಕ್ತಿಗೆ ಕೊರೊನಾ ಸೋಂಕು ತಗಲಿದ್ದು, ಅವರ ಸ್ಥಿತಿ ಗಂಭೀರವಾಗಿತ್ತು. ಆಗ ಅವರ ಕುಟುಂಬದವರು ಪ್ಲಾಸ್ಮಾ ಥೆರಪಿ ನೀಡಲು ವೈದ್ಯರಿಗೆ ತಿಳಿಸಿ ಪ್ಲಾಸ್ಮಾ ಡೋನರ್ ನ್ನು ಕೂಡ ರೋಗಿಯ ಕುಟುಂಬದವರೇ ಹುಡುಕಿದ್ದರು.

 

ಕುಟುಂಬದವರ ಮನವಿ ಮೇರೆಗೆ ಕೊರೊನಾದಿಂದ ಗುಣಮುಖರಾದ ಮಹಿಳೆಯೊಬ್ಬರು ಪ್ಲಾಸ್ಮಾ ದಾನ ಮಾಡಿದ್ದು, ವೈದ್ಯರು ಚಿಕಿತ್ಸೆ ನೀಡಿದ ಹಿನ್ನಲೆಯಲ್ಲಿ ಇದೀಗ ಸೋಂಕಿತ ವ್ಯಕ್ತಿ ಕೊರೊನಾದಿಂದ  ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ ಎನ್ನಲಾಗಿದೆ. ಇದು ಭಾರತದಲ್ಲಿ ಮೊಟ್ಟ ಮೊದಲ ಪ್ರಕರಣವಾಗಿದೆ.

 
ಇದರಲ್ಲಿ ಇನ್ನಷ್ಟು ಓದಿ :