ಪಾಟ್ನಾ: ಬಿಹಾರದಲ್ಲಿ ಇಂತಹದ್ದೊಂದು ರಾಜಕೀಯ ಬೆಳವಣಿಗೆಗೆ ಅದೆಷ್ಟೋ ದಿನದಿಂದ ಪೂರ್ವಭಾವಿ ಬೆಳವಣಿಗೆಗಳು ನಡೆಯುತ್ತಲೇ ಇತ್ತು. ಅಂತೂ ವಿರೋಧ ಪಕ್ಷಗಳ ಮಹಾಘಟಬಂಧನ ಒಡೆದು ಮತ್ತೆ ಹಳೆಯ ಗೆಳೆಯನನ್ನು ತನ್ನ ತೆಕ್ಕೆಗೆ ಸೆಳೆದುಕೊಳ್ಳಲು ಬಿಜೆಪಿ ಯಶಸ್ವಿಯಾಗಿದೆ.ನೋಟು ಅಮಾನ್ಯ ಎಂಬ ಪ್ರಧಾನಿ ಮೋದಿಯವರ ನಿರ್ಧಾರ ನಿತೀಶ್ ಕುಮಾರ್ ಮರಳಿ ಬಿಜೆಪಿಗೆ ಬರಲು ಮೊದಲ ಅಡಿಗಲ್ಲಾಯಿತು ಎಂದರೆ ತಪ್ಪಲ್ಲ. ಅಲ್ಲಿಯವರೆಗೆ ಮೋದಿಯವರನ್ನು ಕಂಡರೆ ಕತ್ತಿ ಮಸೆಯುತ್ತಿದ್ದ ನಿತೀಶ್ ದಿಡೀರ್ ಮೆತ್ತಗಾದರು. ಬಹುಶಃ ಅಷ್ಟು ದಿನ ರಾಜನಂತೆ