ನವದೆಹಲಿ: ತಮಿಳುನಾಡಿನ ಮಮಲ್ಲಾಪುರಂನಲ್ಲಿ ಸಮುದ್ರ ದಂಡೆಯಲ್ಲಿ ಕಸ ಹೆಕ್ಕಿ ಶುಚಿತ್ವ ಮಾಡಿದ ಫೋಟೋ, ವಿಡಿಯೋಗಳನ್ನು ಪ್ರಧಾನಿ ಮೋದಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದೇ ತಡ. ಈಗ ಅದರ ಬಗ್ಗೆಯೇ ಚರ್ಚೆ ಶುರುವಾಗಿದೆ. ಈ ಫೋಟೋಗಳು ಶೋ ಆಫ್ ಗಾಗಿಯೇ? ಇದು ಎಡಿಟ್ ಮಾಡಿದ ಫೋಟೋ ಇರಬೇಕು. ಶುಚಿತ್ವ ಮಾಡಿದರೆ ಅದನ್ನು ಫೋಟೋ ಹಾಕಿ ಪೋಸ್ ಕೊಡೋದು ಯಾಕೆ? ನೀವು ಸಾಮಾಜಿಕ ಕೆಲಸ ಮಾಡುವಲ್ಲೆಲ್ಲಾ ಕ್ಯಾಮರಾ ಮೆನ್ ಗಳನ್ನು ಕೊಂಡೊಯ್ಯುತ್ತೀರಾ ಎಂದು