ವಾಜಪೇಯಿ ಅಂತ್ಯಕ್ರಿಯೆ ನಡುವೆಯೂ ಕೇರಳಕ್ಕೆ ಧಾವಿಸಲಿರುವ ಪ್ರಧಾನಿ ಮೋದಿ

ನವದೆಹಲಿ| Krishnaveni K| Last Modified ಶುಕ್ರವಾರ, 17 ಆಗಸ್ಟ್ 2018 (10:18 IST)
ನವದೆಹಲಿ: ಇಂದು ಮಾಜಿ ಪ್ರಧಾನಿ, ತಮ್ಮ ರಾಜಕೀಯ ಗುರು ಅಟಲ್ ಬಿಹಾರಿ ವಾಜಪೇಯಿ ಅಂತ್ಯಕ್ರಿಯೆ ನಡೆಯಲಿದ್ದರೂ ಅದರ ನಡುವೆಯೇ ಪ್ರಧಾನಿ ಮೋದಿ ತುರ್ತಾಗಿ ಕೇರಳಕ್ಕೆ ಭೇಟಿ ನೀಡಲಿದ್ದಾರೆ.

ಮಳೆಯಿಂದಾಗಿ ಪ್ರವಾಹ ಸದೃಶ ವಾತಾವರಣದಲ್ಲಿರುವ ಕೇರಳದ ಸ್ಥಿತಿ ಗತಿ ತಿಳಿಯಲು ಪ್ರಧಾನಿ ಮೋದಿ ಇಂದು ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ. ಮಳೆಯಿಂದಾಗಿ ಹಲವರು ಸಾವನ್ನಪ್ಪಿದ್ದು, ಸಾವಿರಾರು ಮಂದಿ ನೆಲೆ ಕಳೆದುಕೊಂಡಿದ್ದಾರೆ.


ರಸ್ತೆ, ರೈಲು, ವಿಮಾನ ಸಂಪರ್ಕ ರದ್ದಾಗಿದೆ. ಕೇಂದ್ರ ಈಗಾಗಲೇ 100 ಕೋಟಿ ರೂ. ಪರಿಹಾರ ಧನ ಘೋಷಿಸಿದೆ. ಹಾಗಿದ್ದರೂ ಇಂದು ಸಂಜೆ ಪ್ರಧಾನಿ ಮೋದಿ ಖುದ್ದಾಗಿ ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :