Widgets Magazine

ಭ್ರಷ್ಟಾಚಾರ ತಡೆಗೆ ಮೋದಿ ಸರ್ಕಾರದ ಹೊಸ ಐಡಿಯಾ!

ನವದೆಹಲಿ| Krishnaveni K| Last Modified ಸೋಮವಾರ, 31 ಜುಲೈ 2017 (10:45 IST)
ನವದೆಹಲಿ: ನೋಟು ನಿಷೇಧ, ಜಿಎಸ್ ಟಿ ಸೇರಿದಂತೆ ಕಪ್ಪು ಹಣ, ನಿಗ್ರಹಕ್ಕೆ ಸಾಕಷ್ಟು ಕ್ರಮ ಕೈಗೊಂಡಿರುವ ಪ್ರಧಾನಿ ಮೋದಿ ನೇತೃತ್ವದ ಇದೀಗ ಹೊಸ ಯೋಜನೆ ತರಲು ಮುಂದಾಗಿದೆ.

 
ಅದರಂತೆ ಮೋದಿ ಸರ್ಕಾರದ ಸಚಿವರು ತಮ್ಮ ಇಲಾಖೆಯಲ್ಲಿರುವ ಭ್ರಷ್ಟ  ಅಧಿಕಾರಿಗಳ ಪಟ್ಟಿ ಮಾಡಿ ಕೇಂದ್ರಕ್ಕೆ ವಿವರ ಸಲ್ಲಿಸಲಿದ್ದಾರೆ. ಪ್ರತೀ ಇಲಾಖೆಯ ಜಾಗರೂಕ ದಳ ಈ ಕೆಲಸವನ್ನು ಸದ್ದಿಲ್ಲದೇ ಮಾಡಿ ಮುಗಿಸಲಿದೆ.
 
ಆಗಸ್ಟ್ 15 ರ ನಂತರ ಈ ಕಟ್ಟುನಿಟ್ಟಿನ ಕ್ರಮ ಜಾರಿಯಾಗಲಿದೆ ಎನ್ನಲಾಗಿದೆ. ಕೇಂದ್ರ ಗೃಹ ಇಲಾಖೆ ಈ ನಿಟ್ಟಿನಲ್ಲಿ ಸರ್ಕಾರಿ ಅಧಿಕಾರಿಗಳ ಸೇವಾ ದಾಖಲೆಗಳನ್ನು ಪರಿಶೀಲಿಸುತ್ತಿದೆ. ಆಗಸ್ಟ್ 5 ರೊಳಗಾಗಿ ಭ್ರಷ್ಟ ಅಧಿಕಾರಿಗಳ ಪಟ್ಟಿ ರೆಡಿಯಾಗಲಿದೆಯಂತೆ. ಅಂತಹ ಭ್ರಷ್ಟ ಅಧಿಕಾರಿಗಳ ವಿರುದ್ಧ ಸಿಬಿಐ ಮತ್ತು ಕೇಂದ್ರ ಜಾಗರೂಕ ದಳ ಹದ್ದಿನಗಣ್ಣಿರಸಲಿದೆ.
 
ಇದನ್ನೂ ಓದಿ..  ಅಬ್ದುಲ್ ಕಲಾಂ ಸಮಾಧಿ ಬಳಿ ಭಗವದ್ಗೀತೆ ಪುಸ್ತಕ ವಿವಾದಕ್ಕೆ ಕಾರಣವಾಯ್ತು
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :