ದೇಶದಾದ್ಯಂತ ಮಕರ ಸಂಕ್ರಮಣ ಮತ್ತು ಪೊಂಗಲ್, ಮಾಘ ಬಿಹು ಮತ್ತು ಉತ್ತರಾಯಣದ ಹಬ್ಬದ ಸಂಭ್ರಮ ಮನೆಮಾಡಿದ್ದು, ಈ ಶುಭ ಸಂದರ್ಭದಲ್ಲಿ ಪ್ರಧಾನಿ ಮೋದಿ ದೇಶದ ಜನತೆಗೆ ಸರಣಿ ಟ್ವೀಟ್ ಮೂಲಕ ಶುಭಾಶಯಗಳನ್ನು ಕೋರಿದ್ದಾರೆ. ಇಂದು ದೇಶಾದ್ಯಂತ ವಿವಿಧ ಹಬ್ಬಗಳನ್ನಾಚರಿಸಲಾಗುತ್ತಿದೆ. ಹಬ್ಬದ ಸಂಭ್ರಮದಲ್ಲಿರುವ ಎಲ್ಲರಿಗೂ ನಾನು ಶುಭಾಶಯ ಕೋರುತ್ತೇನೆ ಎಂದು, ಪ್ರಧಾನಿ ಟ್ವೀಟ್ ಮಾಡಿದ್ದಾರೆ. ಮಕರ ಸಂಕ್ರಾತಿ ಶುಭಾಶಯಗಳು, ಈ ದಿನ ಪ್ರತಿಯೊಬ್ಬರ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರಲಿ