ನವದೆಹಲಿ: ಪ್ರಧಾನಿಯಾಗುವುದಾಗಿನಿಂದಲೂ ಸಾಮಾಜಿಕ ಜಾಲತಾಣಗಳ ಬಗ್ಗೆ ವಿಶೇಷ ಒಲವು ಹೊಂದಿದ್ದ ವ್ಯಕ್ತಿ ನರೇಂದ್ರ ಮೋದಿ. ಅವರೀಗ ಜನಪ್ರಿಯ ಸಾಮಾಜಿಕ ಜಾಲತಾಣವಾದ ಫೇಸ್ ಬುಕ್ ನಲ್ಲಿ ಅತೀ ಹೆಚ್ಚು ಹಿಂಬಾಲಕರನ್ನು ಹೊಂದಿದ ಖ್ಯಾತಿಗೆ ಪಾತ್ರರಾಗಿದ್ದಾರೆ. ವರ್ಲ್ಡ್ ಲೀಡರ್ಸ್ ಆನ್ ಫೇಸ್ ಬುಕ್ ಸಮೀಕ್ಷೆಯಲ್ಲಿ ಜಾಗತಿಕ ನಾಯಕರ ಪೈಕಿ ಅತೀ ಹೆಚ್ಚು ಫಾಲೋವರ್ ಗಳನ್ನು ಹೊಂದಿದ ವ್ಯಕ್ತಿಯಾಗಿ ಪ್ರಧಾನಿ ಮೋದಿ ಹೊರಹೊಮ್ಮಿದ್ದಾರೆ. ಜನಪ್ರಿಯ ಸಂವಹನ ಸಂಸ್ಥೆ ಬುರ್ಸನ್-ಮಾರ್ಸ್ ಟೆಲ್ಲರ್ ಈ ಸಮೀಕ್ಷೆ