ದಾವಣಗೆರೆ: ದೇಶದ ಜನತೆ ಎಲ್ಲವನ್ನು ಅಳೆದು ತೂಗಿಯೇ ಬಿಜೆಪಿ ಸರಕಾರವನ್ನು ಕೇಂದ್ರದಲ್ಲಿ ಅಧಿಕಾರಕ್ಕೆ ತಂದಿದ್ದಾರೆ. ನಾನು ಮಾತು ಕೊಟ್ಟಂತೆ ನಿಮ್ಮ ನಗರಕ್ಕೆ ಅಭಿವೃದ್ಧಿಯ ಯೋಜನೆಗಳನ್ನು ನೀಡಿದ್ದೇನೆ. ನಿಮ್ಮ ಸಹಕಾರವಿದ್ದರೆ ನನಗೆ ನನ್ನ ಕೆಲಸದಲ್ಲಿ ಯಾವುದೇ ಕಷ್ಟ ಕಾಣಿಸುವುದಿಲ್ಲ ಎಂದು ದಾವಣಗೆರೆಯಲ್ಲಿ ಬಿಜೆಪಿಯ ವಿಕಾಸ ಪರ್ವ ಸಮಾವೇಶದಲ್ಲಿ ಪ್ರಧಾನಿ ಮೋದಿ ಘೋಷಿಸಿದರು.