ಪವಿತ್ರದಿನವಾದ ಶಿವರಾತ್ರಿ ಹಬ್ಬದ ದಿನದಂದು ಪದ್ಮಭೂಷಣ ಜಗ್ಗಿ ವಾಸುದೇವ್ ನೇತೃತ್ವದ ಈಶಾ ಫೌಂಡೇಷನ್ ನಿರ್ಮಿಸಿರುವ ವಿಶ್ವದ ಅತಿ ಎತ್ತರದ ಶಿವನ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದಾರೆ. ಶಿವನ ಪ್ರತಿಮೆ ಅನಾವರಣಗೊಳಿಸಿದ ನಂತರ ಭಾಷಣ ಮಾಡಿದ ಅವರು, ಶಿವನ 112 ಯೋಗಿ ದಾರಿಗಳನ್ನು ಹುಡುಕುವ ನಿಟ್ಟಿನಲ್ಲಿ 112 ಅಡಿ ಎತ್ತರದ ಶಿವನ ಪ್ರತಿಮೆಯನ್ನು ಸ್ಥಾಪಿಸಲಾಗಿದೆ ಎಂದು ತಿಳಿಸಿದ್ದಾರೆ. ಭಾರತ ವಿವಧತೆಯಲ್ಲಿ ಏಕತೆಯನ್ನು ಹೊಂದಿರುವ ದೇಶ. ವಿವಿಧತೆಯೇ ಭಾರತದ ದೊಡ್ಡ ಶಕ್ತಿ.