ನವದೆಹಲಿ: ಆಗಸ್ಟ್ 15 ರಂದು ದೇಶದ ಪ್ರಧಾನಿ ಕೆಂಪುಕೋಟೆಯಲ್ಲಿ ಧ್ವಜಾರೋಹಣ ಮಾಡಿ ಮಾಡುವ ಭಾಷಣ ಅತ್ಯಂತ ಪ್ರಮುಖದ್ದಾಗಿರುತ್ತದೆ. ಆದರೆ ಈ ಬಾರಿ ಪ್ರಧಾನಿ ಏನು ಭಾಷಣ ಮಾಡಬೇಕೆಂದು ನೀವೂ ಐಡಿಯಾ ಕೊಡಬಹುದು.ಹೌದು. ಪ್ರಧಾನಿ ಮೋದಿ ದೇಶದ ಜನರಿಗೆ ಅಂತಹದ್ದೊಂದು ಅವಕಾಶ ಕೊಟ್ಟಿದ್ದಾರೆ. ಅಂದು ನಾನು ಮಾಡುವ ಭಾಷಣ ನಿಮ್ಮೆಲ್ಲರ ಧ್ವನಿಯಾಗಿರಲಿದೆ. ನಾನು ನಿಮ್ಮ ಧ್ವನಿಯನ್ನು ಹೊರಹಾಕುವ ಒಂದು ಮಾಧ್ಯಮವಷ್ಟೇ. ಹಾಗಾಗಿ ನಾನು ಏನು ಹೇಳಬೇಕೆಂದು ನೀವೇ ಐಡಿಯಾ ಕೊಡಿ ಎಂದು