ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ ಪ್ರಚಾರ ಸಮಾವೇಶದಲ್ಲಿ ಮಾತನಾಡುವಾಗ ನೆಹರೂ ಕುಟುಂಬದ ಬಗ್ಗೆ ಪ್ರಧಾನಿ ಮೋದಿ ತಪ್ಪು ಮಾಹಿತಿ ಕೊಟ್ಟರೇ? ಹೀಗೊಂದು ವಿಚಾರ ಇದೀಗ ಅಂತರ್ಜಾಲದಲ್ಲಿ ಭಾರೀ ಚರ್ಚೆಗೆ ಒಳಗಾಗಿದೆ.ಬುಧವಾರ ಬಿಜೆಪಿ ಸಮಾವೇಶದಲ್ಲಿ ಪ್ರಧಾನಿ ಮೋದಿ ಭಾಷಣದ ನಡುವೆ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಜೈಲಿನಲ್ಲಿದ್ದಾಗ ನೆಹರೂ ಕುಟುಂಬದ ಯಾರೊಬ್ಬರೂ ಅವರನ್ನು ಭೇಟಿಯಾಗಲಿಲ್ಲ ಎಂದಿದ್ದರು. ಇದೀಗ ಚರ್ಚೆಗೆ ಕಾರಣವಾಗಿದೆ.ಮೋದಿ ತಪ್ಪಾಗಿ ಹೇಳಿದ್ದಾರೆ. ಅಸಲಿಗೆ ಜವಹರ್ ಲಾಲ್ ನೆಹರೂ ಭಗತ್ ಸಿಂಗ್