ತೆಲಂಗಾಣ: ಚುನಾವಣಾ ರ್ಯಾಲಿ ವೇಳೆ ಯುವತಿಯೊಬ್ಬಳು ಲೈಟ್ ಕಂಬ ಏರಿ ನಿಂತಿದ್ದಕ್ಕೆ ಪ್ರಧಾನಿ ಮೋದಿ ಕೆಳಗಿಳಿಯಲು ಸೂಚನೆ ನೀಡಿದ್ದಾರೆ.ತೆಲಂಗಾಣದಲ್ಲಿ ಬಿಜೆಪಿ ಪರ ಪ್ರಚಾರ ಭಾಷಣ ವೇಳೆ ಪ್ರಧಾನಿ ಮೋದಿ ಯುವತಿಯೊಬ್ಬಳು ಲೈಟ್ ಕಂಬ ಏರಿ ಗಮನ ಸೆಳೆಯಲು ಯತ್ನಿಸಿದ್ದಳು. ನಾನು ನಿಮ್ಮ ಜೊತೆ ಮಾತನಾಡಬೇಕು ಎನ್ನುತ್ತಾ ಯುವತಿ ಆಳೆತ್ತರದ ಕಂಬ ಏರಿದ್ದಳು.ಇದನ್ನು ಗಮನಿಸಿದ ಮೋದಿ ಭಾಷಣ ನಿಲ್ಲಿಸಿ, ಮಗೂ ಮೊದಲು ನೀನು ಕೆಳಗಿಳಿ. ನಿನ್ನ ಜೊತೆ ನಾನು ಖಂಡಿತಾ ಮಾತನಾಡುತ್ತೇನೆ.