ನವದೆಹಲಿ: ಸಂಸತ್ತಿನ ಮೇಲೆ ಲಷ್ಕರ್ ಇ ತೊಯ್ಬಾ ಉಗ್ರರು ದಾಳಿ ಮಾಡಿ ಇಂದಿಗೆ 19 ವರ್ಷ ಕಳೆದಿದೆ. ಈ ದಿನದಂದು ಸಂಸತ್ತಿನ ರಕ್ಷಣೆ ಮಾಡಲು ಹೋಗಿ ಪ್ರಾಣತೆತ್ತವರನ್ನು ಪ್ರಧಾನಿ ಮೋದಿ ಸ್ಮರಿಸಿಕೊಂಡಿದ್ದಾರೆ. ‘2001 ರಲ್ಲಿ ನಮ್ಮ ಸಂಸತ್ತಿನ ಮೇಲೆ ನಡೆದ ಹೇಡಿಗಳ ದಾಳಿಯನ್ನು ನಾವು ಎಂದಿಗೂ ಮರೆಯಲಾರೆವು. ನಮ್ಮ ಸಂಸತ್ತನ್ನು ಕಾಪಾಡಲು ತಮ್ಮ ಅಮೂಲ್ಯ ಜೀವವನ್ನು ಬಲಿದಾನ ಮಾಡಿದವರನ್ನು ಸ್ಮರಿಸಿಕೊಳ್ಳುತ್ತೇವೆ. ಅವರಿಗೆ ಭಾರತ ಎಂದೆಂದಿಗೂ ಚಿರಋಣಿಯಾಗಿರುತ್ತದೆ’ ಎಂದು ಪ್ರಧಾನಿ ಮೋದಿ