ಆಕ್ಸಿಜನ್ ಪೂರೈಕೆ ವಿಚಾರವಾಗಿ ಇಂದು ಮೋದಿ ಮಹತ್ವದ ಸಭೆ

ನವದೆಹಲಿ| Krishnaveni K| Last Modified ಭಾನುವಾರ, 2 ಮೇ 2021 (09:09 IST)
ನವದೆಹಲಿ: ದೇಶದಲ್ಲಿ ನಿನ್ನೆ ಒಂದೇ ದಿನ 4 ಲಕ್ಷಕ್ಕೂ ಅಧಿಕ ಕೊರೋನಾ ಪ್ರಕರಣಗಳು ಕಂಡುಬಂದ ಬೆನ್ನಲ್ಲೇ ಇಂದು ಪ್ರಧಾನಿ ಮೋದಿ ಆಕ್ಸಿಜನ್ ಪೂರೈಕೆ ವಿಚಾರವಾಗಿ ಸಭೆ ನಡೆಸಲಿದ್ದಾರೆ.

 
ದೇಶದಲ್ಲಿ ವಿವಿಧೆಡೆ ಆಕ್ಸಿಜನ್ ಕೊರತೆ ಆರೋಪಗಳು ಕೇಳಿಬಂದಿವೆ. ಇದರ ಬೆನ್ನಲ್ಲೇ ಆಕ್ಸಿಜನ್ ಲಭ್ಯತೆ ಮತ್ತು ಇತರ ಔಷಧಗಳ ಲಭ್ಯತೆ ಕುರಿತಾಗಿ ಪ್ರಧಾನಿ ಮೋದಿ ಇಂದು ತಜ್ಞರೊಂದಿಗೆ ಮಹತ್ವದ ಸಭೆ ನಡೆಸಲಿದ್ದಾರೆ.
 
ಈಗಾಗಲೇ ಅಮೆರಿಕಾ, ಬ್ರಿಟನ್ ಸೇರಿದಂತೆ ವಿದೇಶಗಳಿಂದ ಆಕ್ಸಿಜನ್ ಮತ್ತಿತರ ವೈದ್ಯಕೀಯ ಉಪಕರಣಗಳನ್ನು ಹೊತ್ತ ವಿಮಾನಗಳು ದೆಹಲಿಗೆ ಬಂದಿಳಿದಿವೆ. ದಾಖಲೆಯ ಪ್ರಮಾಣದಲ್ಲಿ ಕೊರೋನಾ ಪ್ರಕರಣಗಳು ಕಂಡುಬಂದಿರುವ ಹಿನ್ನಲೆಯಲ್ಲಿ ಔಷಧಗಳಿಗೆ ಬೇಡಿಕೆಯೂ ಹೆಚ್ಚಾಗಲಿದೆ.
ಇದರಲ್ಲಿ ಇನ್ನಷ್ಟು ಓದಿ :