Widgets Magazine

ಕೆಲವೇ ಕ್ಷಣಗಳಲ್ಲಿ ಪ್ರಧಾನಿ ಮೋದಿ ರೋಡ್ ಶೋ

NewDelhi| Krishnaveni K| Last Modified ಭಾನುವಾರ, 12 ಮಾರ್ಚ್ 2017 (17:45 IST)
ನವದೆಹಲಿ: ಉತ್ತರ ಪ್ರದೇಶದಲ್ಲಿ ಪ್ರಚಂಡ ವಿಜಯದಿಂದ ಉತ್ಸಾಹದಲ್ಲಿರುವ ಪ್ರಧಾನಿ ಮೋದಿ ಜನತೆಗೆ ಧನ್ಯವಾದ ತಿಳಿಸಲು ರೋಡ್ ಶೋ ಹಮ್ಮಿಕೊಂಡಿದ್ದಾರೆ. ಇದು ಕೆಲವೇ ಕ್ಷಣಗಳಲ್ಲಿ ಆರಂಭವಾಗಲಿದೆ.

 
ದೆಹಲಿಯ ಬಿಜೆಪಿ ಕಚೇರಿ ಮುಂದೆ ಕಾರ್ಯಕರ್ತರು ಮೋದಿ ಬರುವಿಕೆಗಾಗಿ ಕಾದು ಕುಳಿತಿದ್ದಾರೆ. ಇದೇ ಮೊದಲ ಬಾರಿಗೆ ವಿಜಯದ ಬಳಿಕ ಮೋದಿ ದೆಹಲಿಯಲ್ಲಿ ವಿಜಯೋತ್ಸವ ಆಚರಿಸುತ್ತಿದ್ದಾರೆ.
 
ಸುಮಾರು ಒಂದು ಕಿ.ಮೀ. ದೂರ ರೋಡ್ ಶೋ ನಡೆಸಲಿದ್ದಾರೆ ಎಂದು ಮೂಲಗಳು ಹೇಳಿವೆ. ಈ ವೇಳೆ ಮೋದಿ ಸ್ವಾಗತಕ್ಕಾಗಿ ರಸ್ತೆಯ ಇಕ್ಕೆಲೆಗಳಲ್ಲಿ ಕಾರ್ಯಕರ್ತರನ್ನು ಜಮಾಯಿಸಲಾಗಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ


ಇದರಲ್ಲಿ ಇನ್ನಷ್ಟು ಓದಿ :