ನಮ್ಮ ಸಾರ್ವಭೌಮತೆ ಮೇಲೆ ದಾಳಿ ಮಾಡಿದರೆ ಡಬಲ್ ಶಾಕ್ ಕೊಡುವೆವು ಎಂದು ಪ್ರಧಾನಿ

ನವದೆಹಲಿ| Krishnaveni K| Last Modified ಸೋಮವಾರ, 22 ಅಕ್ಟೋಬರ್ 2018 (09:02 IST)
ನವದೆಹಲಿ: ನಮ್ಮ ಸಾರ್ವಭೌಮತೆ ಮೇಲೆ ದಾಳಿ ಮಾಡಿದರೆ ಅದರ ದ್ವಿಗುಣ ಶಕ್ತಿಯಿಂದ ತಿರುಗೇಟು ಕೊಡಲು ಹಿಂದೆ ಮುಂದೆ ನೋಡುವುದಿಲ್ಲ ಎಂದು ಪ್ರಧಾನಿ ಮೋದಿ ಗುಡುಗಿದ್ದಾರೆ.

ಸುಭಾಷ್ ಚಂದ್ರ ಭೋಸ್ ಅವರು ಸ್ಥಾಪಿಸಿದ್ದ ಆಜಾದ್ ಹಿಂದ್ ಸರ್ಕಾರ್ ನ 75 ನೇ ವಾರ್ಷಿಕೋತ್ಸವದಲ್ಲಿ ಮಾತನಾಡಿದ ಪ್ರಧಾನಿ ಮೋದಿ ಎದುರಾಳಿಗಳಿಗೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.


ಸರ್ಕಾರ ಸೈನಿಕರ ಜೀವನ ಉತ್ತಮಪಡಿಸಲು ಮತ್ತು ಅವರಿಗೆ ಬೇಕಾದ ಶಸ್ತ್ರಾಸ್ತ್ರಗಳನ್ನು ಒದಗಿಸಲು ತಕ್ಕ ಕ್ರಮ ಕೈಗೊಳ್ಳುತ್ತಿದೆ ಎಂದಿದ್ದಾರೆ. ಅಷ್ಟೇ ಅಲ್ಲದೆ, ನಾವು ಯಾವ ರಾಷ್ಟ್ರದ ಮೇಲೂ ವಿನಾಕಾರಣ ಕಾಲ್ಕೆರೆದು ಜಗಳಕ್ಕೆ ಹೋಗಲ್ಲ. ಒಂದು ವೇಳೆ ನಮ್ಮ ಸಾರ್ವಭೌಮತ್ವಕ್ಕೇ ದಾಳಿಯಾದರೆ ಸುಮ್ಮನೇ ಕೂರುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.
ಇದರಲ್ಲಿ ಇನ್ನಷ್ಟು ಓದಿ :