ನವದೆಹಲಿ: ಪ್ರಧಾನಿ ಮೋದಿ ಸ್ವಚ್ಛ ಭಾರತದ ಕನಸಿನ ಬಗ್ಗೆ ಆಗಾಗ ಹೇಳುತ್ತಲೇ ಇರುತ್ತಾರೆ. ಆದರೆ ತಾವು ಬಾಯಿಯಲ್ಲಿ ಉಪದೇಶ ಮಾಡುವುದು ಮಾತ್ರವಲ್ಲ, ಹೇಳುವುದನ್ನು ಮಾಡಿ ತೋರಿಸುತ್ತೇನೆ ಎಂದು ಸಾಬೀತುಪಡಿಸಿದ್ದಾರೆ. ಲೋಕಸಭೆ ಸ್ಪೀಕರ್ ಸುಮಿತ್ರಾ ಮಹಾಜನ್ ಅವರ ಮಾತೋಶ್ರೀ ಎನ್ನುವ ಪುಸ್ತಕ ಬಿಡುಗಡೆ ಸಮಾರಂಭ ಅಂತಹದ್ದೊಂದು ಘಟನೆಗೆ ಸಾಕ್ಷಿಯಾಯಿತು. ಸಭೆಯಲ್ಲಿದ್ದ ಎಲ್ಲರೂ ಮೋದಿ ಮಾಡಿದ ಕೆಲಸ ನೋಡಿ ಮೆಚ್ಚುಗೆ ನೀಡಿದರು. ಪುಸ್ತಕ ಬಿಡುಗಡೆ ಮಾಡುವಾಗ ಅದರ ಕವರ್ ಮತ್ತು ರಿಬ್ಬನ್ ತೆಗೆದು