ಬೆಳ್ಳಂ ಬೆಳಿಗ್ಗೆಯೇ ಕೊರೋನಾ ಲಸಿಕೆ ಪಡೆದ ಪ್ರಧಾನಿ ಮೋದಿ

ನವದೆಹಲಿ| Krishnaveni K| Last Modified ಸೋಮವಾರ, 1 ಮಾರ್ಚ್ 2021 (09:56 IST)
ನವದೆಹಲಿ: ಇಂದಿನಿಂದ ಎರಡನೇ ಹಂತದ ಕೊರೋನಾ ಲಸಿಕೆ ನೀಡುವಿಕೆ ಪ್ರಾರಂಭವಾಗಿದ್ದು, ಪ್ರಧಾನಿ ಮೋದಿ ಬೆಳಿಗ್ಗೆಯೇ ಲಸಿಕೆ ಹಾಕಿಸಿಕೊಂಡು ಮಾದರಿಯಾಗಿದ್ದಾರೆ.

 
ಇಂದಿನಿಂದ 60 ವರ್ಷ ಮೇಲ್ಪಟ್ಟ ವೃದ್ಧರಿಗೆ ಮತ್ತು 45 ವರ್ಷ ಮೇಲ್ಪಟ್ಟ ಅನಾರೋಗ್ಯ ಪೀಡಿತರಿಗೆ  ಲಸಿಕೆ ವಿತರಿಸಲಾಗುತ್ತಿದೆ. ಅದರಂತೆ ಪ್ರಧಾನಿ ಮೋದಿ ಇಂದು ಲಸಿಕೆ ಪಡೆದು ತಮ್ಮ ಟ್ವಿಟರ್ ಪೇಜ್ ನಲ್ಲಿ ದೇಶದ ಜನತೆಗೆ ಲಸಿಕೆ ಪಡೆದುಕೊಳ್ಳುವಂತೆ ಮನವಿ ಮಾಡಿದ್ದಾರೆ. ಇನ್ನು, 28 ದಿನಗಳ ಬಳಿಕ ಪ್ರಧಾನಿ ಮೋದಿ ಎರಡನೇ ಹಂತದ ಲಸಿಕೆ ಪಡೆಯಲಿದ್ದಾರೆ. ಲಸಿಕೆ ಪಡೆದ ಬಳಿಕ ಅಲ್ಲಿದ್ದ ನರ್ಸ್ ಗಳ ಜೊತೆ ಕುಶಲೋಪರಿ ನಡೆಸಿದರು.
ಇದರಲ್ಲಿ ಇನ್ನಷ್ಟು ಓದಿ :