ಚೆನ್ನೈ: ಪ್ರಧಾನಿ ಮೋದಿ ಕೆಲವೊಂದು ಅನಿರೀಕ್ಷಿತ ನಿರ್ಧಾರಗಳಿಂದಲೇ ರಾಜಕೀಯ ಚದುರಂಗದಾಟವಾಡುವವರು. ಇದೀಗ ತಮಿಳುನಾಡಿನಲ್ಲೂ ತಮ್ಮದೇ ಲೆಕ್ಕಾಚಾರ ಹಾಕಿಕೊಂಡಿದ್ದಾರೆ ಎನ್ನಲಾಗಿದೆ. ಕಾಂಗ್ರೆಸ್ ಮೈತ್ರಿಕೂಟದಲ್ಲಿ ಪ್ರಮುಖ ಪಕ್ಷವಾಗಿದ್ದ ನಿತೀಶ್ ಕುಮಾರ್ ನೇತೃತ್ವದ ಜೆಡಿಯುವನ್ನು ತನ್ನ ತೆಕ್ಕೆಗೆ ಪಡೆದುಕೊಂಡಂತೆ ತಮಿಳುನಾಡಿನಲ್ಲೂ ಪ್ರಧಾನಿ ಮೋದಿ ಅಣ್ಣಾ ಡಿಎಂಕೆಗೆ ಕೈಕೊಟ್ಟು ಕರುಣಾನಿಧಿ ನೇತೃತ್ವದ ಡಿಎಂಕೆ ಜತೆ ಕೈ ಜೋಡಿಸುವ ಸೂಚನೆ ನೀಡಿದ್ದಾರೆ.ದಿಡೀರ್ ಆಗಿ ಚೆನ್ನೈನ ಕರುಣಾನಿಧಿ ನಿವಾಸಕ್ಕೆ ಭೇಟಿ ನೀಡಿದ ಪ್ರಧಾನಿ ಮೋದಿ ತಮ್ಮ ಜತೆ