ಪ್ರಧಾನಿ ನರೇಂದ್ರ ಮೋದಿಯವರು ಇಂದು ಉತ್ತರಾಖಂಡ್ಗೆ ಭೇಟಿ ನೀಡಲಿದ್ದು, ಪಿಎಂ ಕೇರ್ಸ್ ನಿಧಿಯಿಂದ ನಿರ್ಮಾಣ ಮಾಡಲಾಗಿರುವ 35 ಪ್ರೆಶರ್ ಸ್ವಿಂಗ್ ಹೀರಿಕೊಳ್ಳುವಿಕೆಯ ಆಮ್ಲಜನಕ ಸ್ಥಾವರಗಳನ್ನು ಲೋಕಾರ್ಪಣೆ ಮಾಡಲಿದ್ದಾರೆ. ಈ ಕಾರ್ಯಕ್ರಮ ರಿಶಿಕೇಶದಲ್ಲಿರುವ ಏಮ್ಸ್ನಲ್ಲಿ ಬೆಳಗ್ಗೆ 11 ಗಂಟೆಗೆ ನಡೆಯಲಿದೆ ಎಂದು ಪ್ರಧಾನಮಂತ್ರಿ ಕಚೇರಿ ಮಾಹಿತಿ ನೀಡಿದೆ. ಈ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಕೂಡ ನಿನ್ನೆ ಟ್ವೀಟ್ ಮಾಡಿದ್ದರು. ನಾನು ನಾಳೆ (ಅಕ್ಟೋಬರ್ 7) ದೇವಭೂಮಿ ಉತ್ತರಾಖಂಡ್ಗೆ ತೆರಳುತ್ತಿದ್ದೇನೆ. ಅಲ್ಲಿ