ನವದೆಹಲಿ: ಮೂರು ರಾಷ್ಟ್ರಗಳ ವಿದೇಶ ಪ್ರವಾಸ ಮುಗಿಸಿ ಪ್ರಧಾನಿ ಮೋದಿ ಭಾರತಕ್ಕೆ ಬಂದಿಳಿದಿದ್ದಾರೆ. ಇದರೊಂದಿಗೆ ಅತ್ಯಂತ ಕಡಿಮೆ ಗಂಟೆಗಳಲ್ಲಿ ಹೆಚ್ಚು ರಾಷ್ಟ್ರಗಳನ್ನು ಸುತ್ತಿದ ದಾಖಲೆ ಮಾಡಿದ್ದಾರೆ. ಒಟ್ಟು 95 ಗಂಟೆಗಳ ಯಾತ್ರೆಯಲ್ಲಿ ಅವರು ಅಮೆರಿಕಾ ಬಿಟ್ಟು ಬೇರೆಲ್ಲೂ ತಂಗಿಲ್ಲ. ಒಟ್ಟು 33 ಗಂಟೆಗಳನ್ನು ವಿಮಾನದಲ್ಲಿಯೇ ಕಳೆದಿದ್ದಾರೆ ಪ್ರಧಾನಿ ಮೋದಿ. ಅದರಲ್ಲೂ ಎರಡು ರಾತ್ರಿಗಳನ್ನು ವಿಮಾನ ಪ್ರಯಾಣದಲ್ಲಿಯೇ ಕಳೆದಿದ್ದಾರೆ.ಅಮೆರಿಕಾ, ನೆದರ್ ಲ್ಯಾಂಡ್ ಮತ್ತು ಪೋರ್ಚುಗಲ್ ಗೆ ಅವರು ಭೇಟಿ ನೀಡಿದ್ದರು.