ನವದೆಹಲಿ: ಕರ್ನಾಟಕದ ನೈಋತ್ಯ ವಲಯದ ರೈಲು ಹಳಿ ಮೇಲ್ದರ್ಜೆಗೇರಿಸುವ ನೂತನ ಯೋಜನೆಗಳಿಗೆ ಇಂದು ಪ್ರಧಾನಿ ಮೋದಿ ಚಾಲನೆ ನೀಡಿದ್ದಾರೆ. ನೈಋತ್ಯ ರೈಲ್ವೇ ವ್ಯಾಪ್ತಿಯ ಕರ್ನಾಟಕದ ಕೆಂಗೇರಿ(21 ಕೋಟಿ), ಕೆಆರ್ ಪುರಂ (21.1 ಕೋಟಿ), ಬಂಗಾರಪೇಟೆ(21.5ಕೋಟಿ), ಚನ್ನಪಟ್ಟಣ(20.9 ಕೋಟಿ), ಧರ್ಮಪುರಿ(25.4 ಕೋಟಿ ರೂ.), ದೊಡ್ಡಬಳ್ಳಾಪುರ (21.3 ಕೋಟಿ), ಮಂಡ್ಯ (20.1 ಕೋಟಿ), ರಾಮನಗರ(21 ಕೋಟಿ), ಹಿಂದೂಪುರ(23.9 ಕೋಟಿ), ತುಮಕೂರು(24.1 ಕೋಟಿ), ವೈಟ್ ಫೀಲ್ಡ್(23.3 ಕೋಟಿ), ಕುಪ್ಪಂ(17.6 ಕೋಟಿ), ಮಲ್ಲೇಶ್ವರ(20 ಕೋಟಿ), ಮಾಲೂರು (20.4 ಕೋಟಿ) ಸೇರಿದಂತೆ ಸೌಕರ್ಯಾಭಿವೃದ್ಧಿಯಲ್ಲಿ ಹಿಂದುಳಿದ, ಅವ್ಯವಸ್ಥೆ ಹೊಂದಿರುವ ಸುಮಾರು 15 ರೈಲ್ವೇ ನಿಲ್ದಾಣಗಳನ್ನು ಅಭಿವೃದ್ಧಿಗೊಳಿಸಲಾಗುತ್ತದೆ.