ಚೆನ್ನೈ : ದೀಪಾವಳಿ ಹಬ್ಬದಂದು ಕರ್ತವ್ಯ ನಿರ್ವಹಿಸಿದ್ದಕ್ಕೆ ಪತ್ನಿ ಮುನಿಸಿಕೊಂಡಿದ್ದಾಳೆಂದು ಬೇಸರಗೊಂಡ ಪೊಲೀಸ್ ಸಿಬ್ಬಂದಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಗಣೇಶ್ (26) ಆತ್ಮಹತ್ಯೆ ಮಾಡಿಕೊಂಡ ಪೊಲೀಸ್ ಸಿಬ್ಬಂದಿ. ಇವರು ಪೂನಮಲ್ಲಿಯಲ್ಲಿ ವಿಶೇಷ ಪೊಲೀಸರ 13ನೇ ಬೆಟಾಲಿಯನ್ ನಲ್ಲು ಸೇವೆ ಸಲ್ಲಿಸುತ್ತಿದ್ದರು. ದೀಪಾವಳಗೆ ಮನೆಗೆ ಬರುವುದಾಗಿ ಪತ್ನಿಗೆ ಭರವಸೆ ನೀಡಿದ್ದರು. ಆದರೆ ಅಂದು ಬರಲು ಆಗದ ಕಾರಣ ಮುನಿಸಿಕೊಂಡ ಪತ್ನಿ ಅವರ ಜೊತೆ ಜಗಳವಾಡಿ ತವರು ಮನೆಗೆ ಹೋಗಿದ್ದಾಳೆ.