ಚಹಾಕ್ಕೆಂದು ಕರೆದು ಸಬ್ ಇನ್ಸ್ ಪೆಕ್ಟರ್ ಮೇಲೆ ಪೊಲೀಸ್ ಅಕಾಡೆಮಿ ಶಿಕ್ಷಕ ಮಾಡಿದ್ದೇನು?

ಮೀರತ್| pavithra| Last Modified ಬುಧವಾರ, 27 ಜನವರಿ 2021 (09:46 IST)
ಮೀರತ್ : ಸಬ್ ಇನ್ಸ್ ಪೆಕ್ಟರ್ ಆಗಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬಳ ಮೇಲೆ ಅತ್ಯಾಚಾರ ಹಾಗೂ ಬ್ಲ್ಯಾಕ್ ಮೇಲ್ ಮಾಡಿದ ಹಿನ್ನಲೆಯಲ್ಲಿ  ಮದುವೆಗೆ ಕೆಲವು ದಿನಗಳಿರುವಾಗಲೇ ಅವಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಪೊಲೀಸ್ ಅಕಾಡೆಮಿ ಶಿಕ್ಷಕ ಆಕೆಯನ್ನು ಚಹಾಕ್ಕೆಂದು ಕರೆದು ನಿದ್ರೆ ಬರುವ ಮಾತ್ರೆ ಮಿಕ್ಸ್ ಮಾಡಿ ಮಾನಭಂಗ ಎಸಗಿದ್ದಾನೆ. ಬಳಿಕ ಅವಳಿಗೆ ಮದುವೆ ನಿಶ್ಚಯವಾಗಿದೆ ಎಂದು ತಿಳಿದು ಬ್ಲ್ಯಾಕ್ ಮೇಲ್ ಮಾಡುತ್ತಿದ್ದನು. ಇದರಿಂದ ನೊಂದ ಯುವತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಈ ಘಟನೆಗೆ ಸಂಬಂಧಿಸಿದಂತೆ ಯುವತಿಯ ಸಹೋದರ ಶಿಕ್ಷಕನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ಮುಂದಿನ ಕ್ರಮಕೈಗೊಂಡಿದ್ದಾರೆ ಎನ್ನಲಾಗಿದೆ.ಇದರಲ್ಲಿ ಇನ್ನಷ್ಟು ಓದಿ :