ಕೇಂದ್ರ ಚುನಾವಣೆ ಆಯೋಗದೊಂದಿಗೆ ಎರಡೆಲೆ ಚಿಹ್ನೆ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಎಐಎಡಿಎಂಕೆ (ಅಮ್ಮ) ಬಣದ ನಾಯಕ ಟಿಟಿವಿ ದಿನಕರನ್ ಭಾಗಿಯಾಗಿರುವ ಪ್ರಕರಣದಲ್ಲಿ, ಮಧ್ಯವರ್ತಿಯಾಗಿರುವ ಆರೋಪಿಯ ವಿರುದ್ಧ ದೆಹಲಿ ಪೊಲೀಸರು ವಿಶೇಷ ನ್ಯಾಯಾಲಯದಲ್ಲಿ ಚಾರ್ಜ್ಶೀಟ್ ದಾಖಲಿಸಿದ್ದಾರೆ. ಚಾರ್ಜ್ಶೀಟ್ ಸಲ್ಲಿಸಿದ ಅಂತಿಮ ವರದಿಯಲ್ಲಿ ದಿನಕರನ್ ಹೆಸರನ್ನು ಸೇರ್ಪಡೆಗೊಳಿಸಿಲ್ಲ.ತನಿಖೆ ಮುಕ್ತಾಯದ ನಂತರ ಪೂರಕ ಚಾರ್ಜ್ಶೀಟ್ನಲ್ಲಿ ದಿನಕರನ್ ಮತ್ತು ಇತರ ಆರೋಪಿಗಳ ಹೆಸರುಗಳನ್ನು ಸೇರ್ಪಡೆಗೊಳಿಸಲಾಗುವುದು ಎಂದು ದೆಹಲಿ ಪೊಲೀಸ್ ಮೂಲಗಳು ತಿಳಿಸಿವೆ. ಏಪ್ರಿಲ್