Widgets Magazine

ಮಹಿಳಾ ಕಾನ್ ಸ್ಟೇಬಲ್ ಟ್ರೈನಿಯ ಮೇಲೆ ಪೊಲೀಸ್ ತರಬೇತಿ ಅಧಿಕಾರಿ ಹೀಗಾ ಮಾಡೋದು?

ಅಸ್ಸಾಂ| pavithra| Last Updated: ಗುರುವಾರ, 15 ಅಕ್ಟೋಬರ್ 2020 (11:41 IST)
ಅಸ್ಸಾಂ : ಮಹಿಳಾ ಕಾನ್ ಸ್ಟೇಬಲ್ ಟ್ರೈನಿಯ ಮೇಲೆ ಮಾನಭಂಗ ಎಸಗಿದ ಆರೋಪದ ಮೇಲೆ ಅಸ್ಸಾಂನ ಡೆರ್ಗಾಂವ್ ನಲ್ಲಿರುವ ಸಶಸ್ತ್ರ ಪೊಲೀಸ್ ತರಬೇತಿ ಕೇಂದ್ರದ ಹಿರಿಯ ಅಧಿಕಾರಿಯೊಬ್ಬರನ್ನು ಬಂಧಿಸಲಾಗಿದೆ.

ಆರೋಪಿಯನ್ನು ಸಶಸ್ತ್ರಪೊಲೀಸ್ ತರಬೇತಿ ಕೇಂದ್ರದ ಮುಖ್ಯ ಡ್ರಿಲ್ ಬೋಧಕರಾಗಿ ನೇಮಿಸಲಾಗಿದೆ. ಘಟನೆಯ ಬಳಿಕ ಸಂತ್ರಸ್ತೆ ತನ್ನ ಪತಿಗೆ ಮಾಹಿತಿ ನೀಡಿ ಡೆರ್ಗಾಂವ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾಳೆ.

ಅದರಂತೆ  ಪೊಲೀಸರು ಆರೋಪಿಯನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ ಮತ್ತು ಕಾನೂನಿನ ಪ್ರಕಾರ ಮುಂದುವರಿಯುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ.ಇದರಲ್ಲಿ ಇನ್ನಷ್ಟು ಓದಿ :