ವೇಶ್ಯಾವಾಟಿಕೆ ಮೇಲೆ ಪೊಲೀಸ್ ದಾಳಿ ಮಾಡಿ ಹಲವರನ್ನು ಬಂಧಿಸಿದ್ದಾರೆ. ಗ್ರಾಹಕರಿಂದ ಗಂಟೆಗೆ 1 ಸಾವಿರದಿಂದ 5 ಸಾವಿರ ರೂಪಾಯಿಗಳವರೆಗೆ ದರವನ್ನು ನಿಗಿದಿಪಡಿಸಿದ್ದರು ಎನ್ನಲಾಗಿದೆ. ಒಂದು ರಾತ್ರಿಗೆ 5 ಸಾವಿರ ರೂಪಾಯಿಗಳಿಗಿಂತಲೂ ಹೆಚ್ಚಿನ ಹಣವನ್ನು ಕೀಳುತ್ತಿದ್ದರು. ಇವರ ಹೆಚ್ಚಿನ ಗ್ರಾಹಕರು ಶ್ರೀಮಂತ ಉದ್ಯಮಿಗಳಾಗಿದ್ದರು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ನಗರದ ಲಾಡ್ಜ್ವೊಂದರಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿ ಇಬ್ಬರು ಮಹಿಳೆಯರು ಸೇರಿದಂತೆ ಓರ್ವ ಪುರುಷನನ್ನು ಬಂಧಿಸಿದ್ದಾರೆ.