ಹಣ ಪೀಕುತ್ತಿದ್ದ ಗರ್ಲ್ ಫ್ರೆಂಡ್ ನ ಕೊಂದ ಪೊಲೀಸ್!

ರಾಂಚಿ| Krishnaveni K| Last Modified ಬುಧವಾರ, 24 ನವೆಂಬರ್ 2021 (09:35 IST)
ರಾಂಚಿ: ಪದೇ ಪದೇ ಹಣಕ್ಕಾಗಿ ಬೇಡಿಕೆಯಿಡುತ್ತಿದ್ದ ಪ್ರೇಯಸಿಯ ವರ್ತನೆಯಿಂದ ರೋಸಿ ಹೋದ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಒಬ್ಬರು ಆಕೆಯನ್ನು ಕೊಲೆ ಮಾಡಿದ ಘಟನೆ ಜಾರ್ಖಂಡ್ ನಲ್ಲಿ ನಡೆದಿದೆ.

39 ವರ್ಷದ ಆರೋಪಿ ಅಧಿಕಾರಿ ಯುವತಿಯೊಬ್ಬಳ ಜೊತೆಗೆ ಪ್ರೇಮ ಸಂಬಂಧ ಹೊಂದಿದ್ದರು. ಆದರೆ ಇತ್ತೀಚೆಗೆ ಯುವತಿ ಪದೇ ಪದೇ ಹಣಕ್ಕಾಗಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಳು. ಹಾಗೂ ಆರೋಪಿಯನ್ನು ತನ್ನ ಮನೆಗೆ ಹೋಗಲೂ ಬಿಡುತ್ತಿರಲಿಲ್ಲ.


ಇದರಿಂದ ಬೇಸತ್ತ ಆರೋಪಿ ಅಧಿಕಾರಿ ಆಕೆಯ ತಲೆಗೆ ಬಲವಾಗಿ ಹೊಡೆದು ಕೊಲೆ ಮಾಡಿದ್ದಲ್ಲದೆ, ಬಳಿಕ ಕೆರೆಯೊಂದರಲ್ಲಿ ಮೃತದೇಹ ಎಸೆದಿದ್ದಾರೆ. ಇದೀಗ ಆರೋಪಿ ಅಧಿಕಾರಿಯನ್ನು ಬಂಧಿಸಲಾಗಿದೆ.


ಇದರಲ್ಲಿ ಇನ್ನಷ್ಟು ಓದಿ :