ಅಮೃತಸರ: ಬಿಎಸ್ ಎಫ್ ಯೋಧರು ಸೇನಾ ವಿಚಾರಗಳ ಕುರಿತು ಚರ್ಚೆಗಾಗಿ ಏರ್ಪಡಿಸಿದ್ದ ಸಭೆಯಲ್ಲಿ ಅಧಿಕಾರಿಯೊಬ್ಬರ ಲ್ಯಾಪ್ ಟಾಪ್ ನಲ್ಲಿ ಅಶ್ಲೀಲ ಚಿತ್ರದ ವಿಡಿಯೋಗಳು ಪ್ರಸಾರವಾದ ಘಟನೆ ಪಂಜಾಬ್ನ ಫಿರೋಜ್ಪುರ ಜಿಲ್ಲೆಯಲ್ಲಿರುವ 77 ಬೆಟಾಲಿಯನ್ ಪಡೆ ಮುಖ್ಯ ಕಚೇರಿಯಲ್ಲಿ ನಡೆದಿದೆ. ಸಭೆಯಲ್ಲಿ ಅಧಿಕಾರಿಯೊಬ್ಬರು ತಮ್ಮ ಲ್ಯಾಪ್ ಟಾಪ್ ಮೂಲಕ ಪ್ರೆಸೆಂಟೇಷನ್ ನೀಡಲು ಮುಂದಾಗಿದ್ದಾರೆ. ಈ ವೇಳೆ ಅಶ್ಲೀಲ ವಿಡಿಯೋಗಳು ಪ್ರಸಾರವಾಗಿದೆ. ಸಭೆಯಲ್ಲಿ 8 ಮಹಿಳಾ ಸಿಬ್ಬಂದಿಗಳೂ ಕೂಡ ಭಾಗಿಯಾಗಿದ್ದರು. ಇದರಿಂದಾಗಿ