ನವದೆಹಲಿ : ಜಿಎಸ್ಟಿ ಮಂಡಳಿಯ ಶಿಫಾರಸುಗಳ ಪಾಲನೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಕಡ್ಡಾಯವಲ್ಲ. ನಮ್ಮದು ಸಹಕಾರ ಒಕ್ಕೂಟ ವ್ಯವಸ್ಥೆಯಾದ ಕಾರಣ, ಮಂಡಳಿಯ ಶಿಫಾರಸುಗಳು ಕೇವಲ ಮೌಲ್ಯಯುತ ಸಲಹೆಗಳಾಗಿರುತ್ತವೆ ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ.ಜೊತೆಗೆ ಜಿಎಸ್ಟಿ ನಿಯಮ ರೂಪಿಸುವಲ್ಲಿ ಸಂಸತ್ ಮತ್ತು ರಾಜ್ಯ ವಿಧಾನಸಭೆಗಳು ಸಮಾನ ಅಧಿಕಾರ ಹೊಂದಿವೆ. ಜಿಎಸ್ಟಿ ಮಂಡಳಿಯು ಮಾಡುವ ಶಿಫಾರಸುಗಳು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಒಳಗೊಂಡ ಮಾತುಕತೆಯ ಮೂಲಕ ಹೊರಬರುವ ಫಲ.ಜಿಎಸ್ಟಿ