ಜನಾರ್ದನ ರೆಡ್ಡಿ ಬೇಲ್ ಡೀಲ್ ಪ್ರಕರಣದ ಆರೋಪಿ ಮಾಜಿ ನ್ಯಾಯಾಧೀಶ ಪ್ರಭಾಕರ ರಾವ್ ಹೈದರಾಬಾದ್ನಲ್ಲಿ ನಿಗೂಢ ಸಾವನ್ನಪ್ಪಿದ ಘಟನೆ ಸಂಭವಿಸಿದೆ. ಹೈದರಬಾದಾದ್ ಈಸ್ಟ್ ಮಾರೆಡ್ಪಲ್ಲಿಯಲ್ಲಿರುವ ಅವರ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಅವರ ಶವ ಪತ್ತೆಯಾಗಿದೆ. ಅವರ ಮೃತದೇಹವನ್ನು ಗಾಂಧಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಶವಪರೀಕ್ಷೆ ನಂತರವೇ ಸಾವಿನ ಕಾರಣ ತಿಳಿದುಬರಲಿದೆ. ಪ್ರಭಾಕರ ರಾವ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆಯೇ ಅಥವಾ ಬೇರಾವುದೇ ರೀತಿಯಲ್ಲಿ ಸಾವನ್ನಪ್ಪಿದ್ದಾರೆಯೇ ಎನ್ನುವುದು ಶವ ಪರೀಕ್ಷೆ ನಂತರವೇ ತಿಳಿದುಬರಲಿದೆ.ಪೊಲೀಸರು ಅನುಮಾನಾಸ್ಪದ ಸಾವನ್ನು